PLANTAUX
banner-1

ARECANUT PLANTAION

CodePen - No JavaScript, Simple Accordion

ಅಡಿಕೆ ಬೆಳೆಯ ಸಂಪೂರ್ಣ ಬೆಳವಣಿಗೆಗೆ

Power Soiler

ಬಳಕೆಯ ವಿಧಾನ : ಪ್ರಶ್ನೋತ್ತರಗಳು

1. ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನದ ಒಂದು ಮೆಗಾ ಪ್ಯಾಕ್ನಲ್ಲಿ ಏನೇನು ಇರುತ್ತದೆ ?

• ಪ್ರಮುಖ ಪೋಷಕಾಂಶಗಳಾದ ಸಾರಜನಕ(N), ರಂಜಕ(P) ಹಾಗು ಪೊಟ್ಯಾಶ್(K). ಈ ಮೂರು ಅಂಶಗಳನ್ನು ಸಕಾಲಕ್ಕೆ ಒದಗಿಸುವ ಸೂಕ್ಷ್ಮಾಣು ಜೀವಿಗಳು,
• ವಾತಾವಾರಣದಿಂದ ಸಾರಜನಕ ಸಂಗ್ರಹಿಸಿ ಇಡಿದಿಡುವ ಹಾಗು ಮಣ್ಣಿನಲ್ಲಿ ಸಸ್ಯಗಳ ಬೇರಿಗೆ ದೊರಕದೆ ಇರುವ ರಂಜಕ, ಪೊಟ್ಯಾಷ್, ಸತು(Zn) ವಿನ ಸಂಕೀರ್ಣ ರೂಪದಿಂದ ಬೇರಿಗೆ ದೊರಕುವ ಸುಲಭ ರೂಪಕ್ಕೆ ಪರಿವರ್ತಿಸುವ ಸೂಕ್ಷ್ಮಾಣು ಜೀವಿಗಳು,
• ಬೆಳೆಗಳನ್ನು ಅನೇಕ ರೋಗಗಳಿಂದ ರಕ್ಷಿಸುವ ಹಾಗು ಅನೇಕ ಬೆಳೆವರ್ಧಕ ಹಾರ್ಮೂನುಗಳನ್ನು ಒದಗಿಸುವ ಸೂಕ್ಷ್ಮಾಣು ಜೀವಿಗಳು, ಹಾಗು ಅತಿ ಮುಖ್ಯವಾಗಿ ಸಸ್ಯಗಳ ಬೇರಿನ ವ್ಯಾಪ್ತಿಯಲ್ಲಿ ಇರಲೇ ಬೇಕಾದ ಅನುಕೂಲಕರ ಸೂಕ್ಶ್ಮಾಣು ಜೀವಿಗಳನ್ನ ಒಳಗೊಂಡಂತೆ ಪ್ರತಿ ಬೆಳೆಯ ಸಂಪೂರ್ಣ ಆರೋಗ್ಯಕರ ಬೆಳವಣಿಗೆಗೆ ಬೇಕಾಗುವ ಎಲ್ಲಾ ಸೂಕ್ಷ್ಮಪೋಷಕಾಂಶಗಳು ಹಾಗೂ 7 ಬಗೆಯ ಬೆಳವಣಿಗೆ ಉತ್ತೇಜಕಗಳು (Growth promoters) ಇರುತ್ತವ

ಸೂಕ್ಷ್ಮಾಣು ಜೀವಿಗಳು (Beneficial microorganisms) :

1. ಅಜೋಸ್ಪೆರಿಲಂ ಬ್ರಾಸಿಲೆನ್ಸ್ (Bio-N) : (Azospirillum brasilense)
2.ಸೂಡೋಮೊನಾಸ್ ಪ್ಲೋರೆಸೆನ್ಸ್ (Bio-P) : (Pseudomonas fluorescens)
3. ಫ್ರಾಚುರಿಯ ಆರೆಂಶಿಯಾ (Bio-K) : (Frateuria aurantia)
4. ಥಯೋಬ್ಯಾಸಿಲಸ್ ಥಯೋಕ್ಸಿಡೆನ್ಸ್ (Bio-Zn) : (Thiobacillus thiooxidans)
5. ಟ್ರೈಕೋಡರ್ಮ ವಿರಿಡೆ : (Trichoderma viride)
6. ಪ್ಯಾಸಿಲೋಮೈಸಿಸ್ ಲೈಲಾಸಿನಸ್ : (Paecilomyces lilacinus)

ಸೂಕ್ಷ್ಮಪೋಷಕಾಂಶಗಳು (Micronutrients):

• ಬೋರಾನ್ (Boron)
• ಜಿಂಕ್ (Zinc)
• ಮೆಗ್ನಿಷಿಯಂ (Magnesium)
• ಮ್ಯಾಂಗನೀಸ್ (Manganese)
• ಕಬ್ಬಿಣ (Iron),
• ಸಲ್ಪರ್ (Sulfur)
• ತಾಮ್ರ (Copper)
• ಕ್ಯಾಲ್ಸಿಯಂ (Calcium).

ಬೆಳವಣಿಗೆ ಉತ್ತೇಜಕಗಳು(Growth Promoters):

• ಪ್ರೋಟೀನ್ : (Protein),
• ಅಮೈನೋ ಆಸಿಡ್ ಡಿರೈವೇಟಿವ್ : (Amino acid derivatives),
• ಪೊಟ್ಯಾಷಿಯಂ ಹ್ಯುಮೇಟ್ : (Potassium humate)
• ಸೀವೀಡ್ಎಕ್ಸ್ಟ್ರ್ಯಾಕ್ಟ್(ಸಮುದ್ರ ಪಾಚಿ) : (Seaweed extract)
• ಇಂಡೋಲ್ ಅಸಿಟಿಕ್ ಆಸಿಡ್ : (IAA)
• ಜಿಬ್ಬರ್ಲಿಕ್ ಆಸಿಡ್ : (Gibberellic acid)
• ಸೈಟೋಕೈನಿನ್ : (Cytokinins)
• ಒಳಗೊಂಡು ಒಟ್ಟು 23 ಕ್ಕೂ ಹೆಚ್ಚು ಅಂಶಗಳು ಇರುತ್ತವೆ.

2. POWER SOILER ಒಂದು ಮೆಗಾ ಪ್ಯಾಕನ್ನು ಎಷ್ಟು ಅಡಿಕೆ ಗಿಡ/ ಮರಗಳಿಗೆ ಮತ್ತು ಎಷ್ಟು ಬಾರಿ ಉಪಯೋಗಿಸಬಹುದು?

Power Soiler ಉತ್ಪನ್ನವನ್ನು 600 ಅಡಿಕೆ ಗಿಡಗಳಿಗೆ ಒಟ್ಟು 2 ಭಾರಿ(ಕಂತಿನಲ್ಲಿ) ಉಪಯೋಗಿಸಲು ತಯಾರಿಸಲಾಗಿದೆ, ಮೊದಲನೇ ಬಳಕೆಯ 20 ದಿನಗಳ ನಂತರ ಎರಡನೇ ಹಂತದ ಸಿಂಪರಣೆ ಅಥವಾ ಬೇರಿಗೆ ಆಕುವುದು ಉತ್ತಮ .

3. ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಮೆಗಾ ಪ್ಯಾಕ್ ಒಳಗಿನ ಮಿನಿ ಬಾಕ್ಸ್ ಬಗ್ಗೆ ತಿಳಿಸಿ?

ಒಂದು ಪವರ್ ಸಾಯಿಲರ್ ಮೆಗಾ ಪ್ಯಾಕ್ ನಲ್ಲಿ ಒಟ್ಟು 6 ಮಿನಿ ಬಾಕ್ಸ್ ಇರುತ್ತವೆ. ಒಂದೊಂದು ಮಿನಿ ಬಾಕ್ಸ್ನ್ನು ಪ್ರತೀ 200 ಅಡಿಕೆ ಗಿಡಗಳಿಗೆ ಒಂದು ಸಾರಿ ಬಳಸುವಂತೆ ಪ್ಯಾಕ್ ಮಾಡಲಾಗಿದೆ. ಪ್ರತೀ ಬಳಕೆಗೆ 600 ಅಡಿಕೆ ಗಿಡಗಳಿಗೆ ಆಗುವಷ್ಟು 3 ಮಿನಿ ಬಾಕ್ಸ್ ಇರುತ್ತವೆ. ಅದರಂತೆ ಒಟ್ಟು 2 ಸಾರಿ ಬಳಸಲು ಒಟ್ಟು 6 ಮಿನಿ ಬಾಕ್ಸ್ಗಳು ಇರುತ್ತವೆ. ಅಡಿಕೆ ಗಿಡಗಳ ಅವಶ್ಯಕತೆಗೆ ತಕ್ಕಂತೆ ಮಿನಿಬಾಕ್ಸ್ ಒಳಗಿನ ಅಂಶಗಳೂ ಬದಲಾಗುತ್ತಾ ಹೋಗುತ್ತವೆ.

4. ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನಗಳ ಒಂದೊಂದು ವಿಧದ ಸೂಕ್ಷ್ಮಾಣು ಜೀವಿಗಳು ಹಾಗೂ ಕೆಲವು ಪೋಷಕಾಂಶಗಳನ್ನು ಬೇರೆ ಬೇರೆ ಪ್ಯಾಕಿಂಗ್ ಮಾಡಿರುವ ಉದ್ದೇಶವೇನು?

ಪವರ್ ಸಾಯಿಲರ್ ಉತ್ಪನ್ನವು ಸೂಕ್ಷ್ಮಾಣು ಜೀವಿಗಳ ಆಗರವಾಗಿದ್ದು ಒಂದಕ್ಕಿಂತ ಹೆಚ್ಚು ಸೂಕ್ಷ್ಮಾಣು ಜೀವಿಗಳನ್ನು ಒಂದೇ ಪ್ಯಾಕ್ನಲ್ಲಿ ಸಂಗ್ರಹಿಸುವುದರಿಂದ ಕೆಲವು ಪ್ರಭೇದಗಳ ಒಂದಾಣಿಕೆಯಲ್ಲಿ ವ್ಯತಾಸ ಕಂಡುಬಂದು ಸೂಕ್ಷಾಣು ಜೀವಿಗಳ ಕಾರ್ಯ ಕ್ಷಮತೆಯಲ್ಲಿ ಗಣನೀಯವಾಗಿ ವ್ಯತ್ಯಾಸವಾಗುತ್ತದೆ ಹಾಗೂ ಅವುಗಳು ಒಂದಕ್ಕೊಂದು ಪೂರಕವಾಗಿರುವುದಿಲ್ಲ, ಆದ್ದರಿಂದ ಪ್ರತಿಯೊಂದು ಸೂಕ್ಷ್ಮಾಣು ಜೀವಿಯನ್ನು ಬೇರೆ ಬೇರೆಯಾಗಿ ಸಂಗ್ರಹಿಸಿಡುವುದು ಸೂಕ್ತವಾದ ಕ್ರಮವಾಗಿದೆ.

5. ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ನಲ್ಲಿರುವ ಪ್ರತಿ ಕಂತಿನ ಉತ್ಪನ್ನಗಳನ್ನು ಒಂದೇ ದಿನದಲ್ಲಿ ಉಪಯೋಗಿಸಬೇಕಾ? ಎಲ್ಲಾ ಗಿಡಗಳಿಗೆ ಒಂದೇ ದಿನ ಬಳಸಬೇಕಾ?

ಉತ್ಪನ್ನವು ಸೂಕ್ಷ್ಮಾಣು ಜೀವಿ ಮತ್ತು ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿದೆ ಆದ್ದರಿಂದ ನೀರಿನಲ್ಲಿ ಬೆರೆಸಿದ ಮಿಶ್ರಣವನ್ನು ಒಂದು ದಿನಕ್ಕಿಂತ ಹೆಚ್ಚು ಕಾಲ ಸಂಗ್ರಹಿಸಿಡುವುದು ವೈಜ್ಞಾನಿಕವಾಗಿ ಸೂಕ್ತವಲ್ಲ. ಆದ್ದರಿಂದ ಆಯಾ ದಿನಕ್ಕೆ ಬೇಕಾಗುವ ಆಯಾ ದಿನದಲ್ಲಿ ಬಳಸಬಹುದಾದ ಪ್ರಮಾಣದ ಮಿಶ್ರಣವನ್ನು ತಯಾರಿಸಿ ಆಯಾ ದಿನವೇ ಉಪಯೋಗಿಸುವುದು ಸೂಕ್ತ ಹಾಗು ನಿಮ್ಮ ತೋಟದ ಎಲ್ಲಾ ಗಿಡಗಳಿಗೂ ಒಂದೇ ದಿನ ಉಪಯೋಗಿಸಬೇಕೆಂಬ ಷರತ್ತು ಇರುವುದಿಲ್ಲ. ಅಂದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಿಶ್ರಣವನ್ನು ತಯಾರಿಸಿ ಪ್ರತಿ ದಿನ ಇಂತಿಷ್ಟು ಗಿಡಗಳಿಗೆಂದು ಉಪಯೋಗಿಸಬಹುದು.

6. ಅಡಿಕೆ ಗಿಡಗಳಿಗೆ ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಬಳಸುವ ಪ್ರಮಾಣ ತಿಳಿಸಿ?

ಫಸಲು ಬರುತ್ತಿರುವ ಅಡಿಕೆ ಮರ ಅಥವಾ ಫಸಲು ಶುರುವಾಗದ ಸಸಿ ಗಿಡಗಳಿಗೆ ಒಂದು ಲೀಟರ್ ಮಿಶ್ರಣ ಹಾಕಬೇಕು.

7. ಪವರ್ ಸಾಯಿಲರ್ ಮಿಶ್ರಣವನ್ನು ತಯಾರಿಸುವಾಗ ಅದರ ಜೊತೆಯಲ್ಲಿ ಬೇರೆ ರಾಸಾಯನಿಕ ಗೊಬ್ಬರ ಅಥವಾ ಕ್ರಿಮಿನಾಶಕಗಳನ್ನು ಮಿಶ್ರಣ ಮಾಡಬಹುದಾ?

ನೀರಿನಲ್ಲಿ ಸಂಪೂರ್ಣವಾಗಿ ಕರಗುವ (ಉದಾಹರಣೆಗೆ 19:19:19) ರಾಸಾಯನಿಕ ಗೊಬ್ಬರಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ಅವಶ್ಯಕವಿದ್ದಾಗ ಮಾತ್ರ ಮಿಶ್ರಣ ಮಾಡಬಹುದು ಇದನ್ನು ಹೊರತುಪಡಿಸಿ ಬೇರಾವ ರಾಸಾಯನಿಕ ಬಳಸುವುದು ಸೂಕ್ತವಲ್ಲ. ವಿಶೇಷ ಸೂಚನೆ: ಅತಿ ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದ ರಿಂದ ಮಣ್ಣಿನ ಆರೋಗ್ಯ ಹಾಳಾಗುವುದಲ್ಲದೇ ಗಿಡಗಳಲ್ಲಿ ಕೀಟ ಮತ್ತು ರೋಗ ಭಾದೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ರಾಸಾಯನಿಕ ಗೊಬ್ಬರಗಳನ್ನು ವೈಜ್ಞಾನಿಕ ರೀತಿಯ ಪ್ರಮಾಣದಲ್ಲಿ, ವಿವಿಧ ಹಂತಗಳಲ್ಲಿ , ಸರಿಯಾದ ಪ್ರಮಾಣದಲ್ಲಿ ಬಳಸುವುದು ಸೂಕ್ತ.

8. ಪವರ್ ಸಾಯಿಲರ್ ಉತ್ಪನ್ನದ ಜೊತೆಯಲ್ಲಿ (Insecticides) ಕೀಟನಾಶಕ, ರೋಗನಾಶಕ (Pesticides) ಹಾಗೂ ಶೀಲೀಂದ್ರ ನಾಶಕಗಳನ್ನು (Fungicides) ಬಳಸಬಹುದಾ?

ಉತ್ಪನ್ನವು ಅನೇಕ ಸೂಕ್ಷ್ಮಾಣು ಜೀವಿಗಳ ಆಗರವಾಗಿದ್ದು ಮಿಶ್ರಣದ ಜೊತೆಯಲ್ಲಿ ಯಾವುದೇ ತರಹದ ಕೀಟನಾಶಕ, ರೋಗನಾಶಕ ಮತ್ತು ಶೀಲೀಂದ್ರ ನಾಶಕ ಬಳಸುವುದರಿಂದ ಅಥವಾ ಮಿಶ್ರಣ ಮಾಡುವುದರಿಂದ ಉಪಯುಕ್ತ ಸೂಕ್ಷ್ಮಾಣು ಜೀವಿಗಳ ಸಾವಿಗೆ ಕಾರಣವಾಗುತ್ತದೆ.ಆದ್ದರಿಂದ ಪವರ್ ಸಾಯಿಲರ್ ಉತ್ಪನ್ನದ ಜೊತೆಯಲ್ಲಿ ಇವುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಅಡಿಕೆಗೆ ರೋಗ ಹಾಗೂ ಕೀಟಗಳ ಭಾದೆ ಕಂಡು ಬಂದಲ್ಲಿ ಸಮಗ್ರವಾದ ನಿರ್ವಹಣೆಗೆ ಬೇಕಾದ ಕೀಟನಾಶಕ, ರೋಗನಾಶಕ ಹಾಗೂ ಶೀಲೀಂಧ್ರ ನಾಶಕಗಳನ್ನು ಬೇಕಾದ ಪ್ರಮಾಣದಲ್ಲಿ ಪವರ್ ಸಾಯಿಲರ್ ಉತ್ಪನ್ನ ಬಳಸಿದ ಕನಿಷ್ಠ 8 ದಿನಗಳ ನಂತರ ಬಳಸುವುದು ಸೂಕ್ತ.

9. Power Soiler ಉತ್ಪನ್ನವನ್ನು ಅಡಿಕೆಗೆ ಬಳಸುವುದರಿಂದ ಮಣ್ಣಿನ ಆರೋಗ್ಯ, ಗಿಡದ ಆರೋಗ್ಯ ಮತ್ತು ಇಳುವರಿ ಇದರಲ್ಲಿ ಯಾವುದು ಉತ್ತಮಗೊಳ್ಳುತ್ತದೆ?

ರೈತರಿಗೆ ತಿಳಿದಿರುವಂತೆ ಮಣ್ಣಿನ ಆರೋಗ್ಯ ಚೆನ್ನಾಗಿದ್ದರೆ ಗಿಡದ ಆರೋಗ್ಯ ಚೆನ್ನಾಗಿರುತ್ತದೆ, ಅದೇ ರೀತಿ ಗಿಡದ ಆರೋಗ್ಯ ಚೆನ್ನಾಗಿದ್ದರೆ ಇಳುವರಿಯೂ ಚೆನ್ನಾಗಿರುತ್ತದೆ, ಅಂದರೆ ಯಾವ ಮಣ್ಣಿನಲ್ಲಿ ಸಾವಯವ ಅಂಶ ಮತ್ತು ಸೂಕ್ಷ್ಮಾಣು ಜೀವಿಗಳು ಹೆಚ್ಚು ಇರುತ್ತವೆಯೋ ಅಂತಹ ಮಣ್ಣನ್ನು ಆರೋಗ್ಯವಂತ ಮಣ್ಣು ಎಂದು ಕರೆಯಬಹುದು. ಯಾವ ಮಣ್ಣಿನಲ್ಲಿ ಸಾವಯವ ಅಂಶದ ಜೊತೆಗೆ ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನವು ಸೇರುತ್ತದೆಯೋ ಅಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ವೃದ್ಧಿಸುತ್ತದೆ. ಆದ್ದರಿಂದ ಪವರ್ ಸಾಯಿಲರ್ ಬಳಸಿದ ಮಣ್ಣು ಆರೋಗ್ಯಕರ ಮಣ್ಣಾಗಿ ಪರಿವರ್ತಿತವಾಗುತ್ತದೆ. ಜೊತೆಗೆ ಬಳಸಿದ ಅಡಿಕೆ ಗಿಡದಲ್ಲಿ ಮಣ್ಣಿನ ಆರೋಗ್ಯ ಮತ್ತು ಗಿಡದ ಆರೋಗ್ಯದ ಜೊತೆಗೆ ಇಳುವರಿಯೂ ವೃದ್ಧಿಸುತ್ತದೆ.

10. ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನವು ಸಾವಯವ/ರಾಸಾಯನಿಕ/ ಜೈವಿಕ ಅಂಶವುಳ್ಳದ್ದಾ ತಿಳಿಸಿ?

ಸಾಮಾನ್ಯವಾಗಿ ಎಲ್ಲಾ ಸಸ್ಯಗಳು ಪರಿಪೂರ್ಣವಾಗಿ ಬೆಳೆಯಲು ವೈಜ್ಞಾನಿಕವಾದ ಸಮತೋಲನ ಪ್ರಮಾಣದಲ್ಲಿ ಸಾವಯವ, ರಾಸಾಯನಿಕ ಹಾಗೂ ಜೈವಿಕ ಈ ಮೂರೂ ರೂಪದ ಅಂಶಗಳ ಮೇಲೆ ಅವಲಂಬಿಸಿರುತ್ತವೆ. ಈ ಮೇಲಿನ ಮೂರರಲ್ಲಿ ಯಾವುದಾದರೂ ಒಂದೇ ಅಂಶದಿಂದ ಸಸ್ಯದ ಬೆಳವಣಿಗೆಯನ್ನು ಸಂಪೂರ್ಣಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಈ 3 ಅಂಶಗಳನ್ನು ಒಟ್ಟುಗೂಡಿಸಿ ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ರೈತರಿಗೆ ಉಪಯೋಗಿಸಲು ಸುಲಭವಾದ ವಿಧಾನದಲ್ಲಿ ಒದಗಿಸಲಾಗಿದೆ.

11. ಅಡಿಕೆ ಗಿಡ/ ಮರಗಳಿಗೆ ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಒಂದನ್ನೆ ಬಳಸಿದರೆ ಸಾಕಾ? ಜೊತೆಗೆ ರಾಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಸಬೇಕಾ?

ಅಡಿಕೆ ಗಿಡ/ ಮರಗಳು ಪರಿಪೂರ್ಣವಾಗಿ ಬೆಳೆಯಲು
a) ಸಾರಜನಕ (N),ರಂಜಕ (P), ಪೋಟ್ಯಾಷ್ (K)
b) ಸಾವಯವ ಅಂಶ
c) ಸೂಕ್ಷ್ಮ ಪೋಷಕಾಂಶಗಳು (ಬೋರಾನ್, ಜಿಂಕ್, ಮೆಗ್ನಿಷಿಯಂ, ಮ್ಯಾಂಗನೀಸ್, ಕಬ್ಬಿಣ, ಸಲ್ಪರ್, ತಾಮ್ರ, ಕ್ಯಾಲ್ಸಿಯಂ)
d) ಸೂಕ್ಷಾಣು ಜೀವಿಗಳು ಬೇಕಾಗುತ್ತವೆ.
ಈ ಮೇಲಿನ ಯಾವುದೇ ಒಂದು ಅಂಶ ಕಡಿಮೆಯಾದರೂ ಗಿಡದ ಬೆಳವಣಿಗೆ ಕುಂಟಿತಗೊಳ್ಳುತ್ತದೆ. ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನದಲ್ಲಿ ಮೇಲೆ ತಿಳಿಸಿದ ರಾಸಾಯನಿಕ ರೂಪದ ಸಾರಜನಕ, ರಂಜಕ, ಪೊಟ್ಯಾಷ್ ಹೊರತುಪಡಿಸಿ ಉಳಿದೆಲ್ಲಾ ಅಂಶಗಳು ಒಳಗೊಂಡಿರುತ್ತದೆ. ಹಾಗೂ ಅತಿ ಮುಖ್ಯವಾಗಿ ವಾತಾವರಣದಲ್ಲಿ ಹಾಗೂ ಮಣ್ಣಿನಲ್ಲಿ ಇರುವ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳನ್ನು ಗಿಡಗಳ ಬೇರುಗಳಿಗೆ ಒದಗಿಸುವ ಸೂಕ್ಷ್ಮಾಣು ಜೀವಿಗಳಾದ ಅಜೋಸ್ಪೆರಿಲಂ(Bio:N,) ಸೂಡೊಮೊನಾಸ್ (Bio:P) ಪ್ರಾಚುರಿಯಾ ಆರೆಂಶಿಯಾ (Bio:K,) ಥಯೋ ಬ್ಯಾಸಿಲಸ್ ಥಯೋ ಆಕ್ಸಿಡೆನ್ಸ್ (Bio:Zn) ಗಳನ್ನು ಸೇರಿಸಲಾಗಿದೆ. ಆದ್ದರಿಂದ ಈ ಮುಂಚೆ ಅಡಿಕೆ ಗಿಡಗಳಿಗೆ ರಾಸಾಯನಿಕ NPK ಬಳಸದೇ ಇದ್ದಲ್ಲಿ ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನ ಬಳಸಿದ ನಂತರ ರಾಸಾಯನಿಕ NPK ಕೊಡುವ ಅವಶ್ಯಕತೆ ಅತಿ ಕಡಿಮೆ ಇರುತ್ತದೆ. ನಿಮ್ಮ ತೋಟದ ಬೆಳವಣಿಗೆಯ ಸ್ಥಿತಿ ಗತಿಯನ್ನು ಹಾಗು ಮಣ್ಣಿನ ಫಲವತ್ತತೆಯನ್ನು ಪರಿಶೀಲಿಸಿ ಸೂಚನೆಯ ಮೇರೆಗೆ NPK ಉಪಯೋಗಿಸಬಹುದು.
ಈ ಮೊದಲು ಅಡಿಕೆ ಗಿಡಗಳಿಗೆ ರಾಸಾಯನಿಕ NPK ಬಳಸಿದ್ದರೆ, ಮೊದಲು ಬಳಸಿದ ಪ್ರಮಾಣದ ಶೇ. 50% ರಷ್ಟು ರಾಸಾಯನಿಕ NPK ಬಳಸಬೇಕು. ಕಾರಣ ರಾಸಾಯನಿಕ NPK ಬಳಸಿದ ಅಡಿಕೆ ಮರದ ಬೇರುಗಳು ರಾಸಾಯನಿಕ NPK ಗೆ ಹೊಂದಿ- ಕೊಂಡಿರುತ್ತವೆ. ಆದ್ದರಿಂದ ವರ್ಷಗಳು ಕಳೆದಂತೆ ರಾಸಾಯನಿಕ NPK ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುತ್ತಾ ಬಂದು ಕೆಲವು ವರ್ಷಗಳು ಕಳೆದ ನಂತರ ಮಣ್ಣಿನ ಪರಿಸ್ಥಿತಿಗೆ ಅನುಗುಣವಾಗಿ, ಮಣ್ಣಿನ ಫಲವತ್ತತೆಯನ್ನು ಪರಿಶೀಲಿಸಿ ರಾಸಾಯನಿಕ NPK ಯನ್ನು ಸಂಪೂರ್ಣವಾಗಿ ನಿಲ್ಲಿಸಬಹುದು. ಮಣ್ಣಿನಲ್ಲಿನ ಸಾವಯವ ಅಂಶ ಮಣ್ಣಿನಲ್ಲಿನ ಸೂಕ್ಷಾಣು ಜೀವಿಗಳ ನಿರಂತರ ಚಟುವಟಿಕೆಗೆ ತುಂಬಾ ಅವಶ್ಯಕವಾಗಿ ಬೇಕಾಗುತ್ತದೆ. ಮತ್ತು ಸಾವಯವ ಅಂಶ ಮಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಹಿಡಿದಿಡಲು ಹಾಗೂ ಬೇರುಗಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಅತ್ಯವಶ್ಯಕವಾಗಿರುತ್ತದೆ. ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನದಲ್ಲಿ 6 ರೀತಿಯ ಸೂಕ್ಷಾಣು ಜೀವಿಗಳು ಇರುವುದರಿಂದ ಅವುಗಳ ನಿರಂತರ ಚಟುವಟಿಕೆಗೆ ಸಾವಯವ ಅಂಶ ತುಂಬಾ ಅವಶ್ಯಕವಾಗಿರುತ್ತದೆ. ಆದ್ದರಿಂದ ಸರಿಯಾಗಿ ಕೊಳೆತ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ, ಹಸಿರೆಲೆ ಗೊಬ್ಬರ ಅಥವಾ ಉತ್ಕೃಷ್ಟ ಸಾವಯವ ಗೊಬ್ಬರವನ್ನು ಬಳಸುವುದು ಸೂಕ್ತ.

12 ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನವನ್ನು ಅಡಿಕೆ ಗಿಡಗಳಿಗೆ ಬಳಸುವುದರಿಂದ ಅನೇಕ ರೋಗಗಳು ಮತ್ತು ಕೀಟಭಾದೆಯನ್ನು ತಡೆಯಬಹುದಾ?

ಅಡಿಕೆ ಬೆಳೆಯನ್ನು ಸುಮಾರು 600 ವರ್ಷಗಳಿಂದ ತೋಟಗಾರಿಕೆ ಬೆಳೆಯಾಗಿ ಬೆಳೆಯಲಾಗುತ್ತಿದೆ. ಅದರಲ್ಲೂ ಕಳೆದ ನೂರು ವರ್ಷಗಳಿಂದ ಅತೀ ಹೆಚ್ಚು ಆಧ್ಯತೆ ಕೊಟ್ಟು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಕಳೆದ 30-40 ವರ್ಷಗಳ ಹಿಂದೆ ಅಡಿಕೆ ಬೆಳೆಗೆ ಬಾಧಿಸುವ ಕೀಟ ಮತ್ತು ರೋಗಗಳು ಅತೀ ಕಡಿಮೆ ಇದ್ದವು. ಅದಕ್ಕೆ ಅತೀ ಮುಖ್ಯ ಕಾರಣ ರಾಸಾಯನಿಕಗಳನ್ನು ಗೊಬ್ಬರದ ರೂಪದಲ್ಲಾಗಲೀ, ಔಷದಿಯ ರೂಪದಲ್ಲಾಗಲೀ, ಕಳೆ ನಾಶಕ ರೂಪದಲ್ಲಾಗಲೀ ಬಳಸದೇ ಇರುವುದು. ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗೆ ದೊರೆಯುವ ಬೆಲೆಯ ಹೆಚ್ಚಳದಿಂದ ಅಡಿಕೆ ಬೆಳೆಯುವ ಕೆಲವು ಬೆಳೆಗಾಗರು ಮಣ್ಣಿನ ಆರೋಗ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಬೆಳೆಯ ಇಳುವರಿಗೆ ಹೆಚ್ಚು ಆದ್ಯತೆ ಕೊಟ್ಟು ಅನೇಕ ರಾಸಾಯನಿಕಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಬಳಸಲು ಪ್ರಾರಂಭಿಸಿದ ನಂತರ ಅತೀ ಹೆಚ್ಚು ಕೀಟ ಮತ್ತು ರೋಗಭಾದೆ ಕಾಡುತ್ತಿರುವುದಲ್ಲದೇ ಇಳುವರಿಯಲ್ಲೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿ ಅಡಿಕೆ ಬೆಳೆಯ ಆಯಸ್ಸು ಕಡಿಮೆಯಾಗುತ್ತಾ ಬರುತ್ತಿದೆ. ಇವೆಲ್ಲವು ಅತೀ ನಿಧಾನದಲ್ಲಿ ರೈತರಿಗೆ ಅರಿವಿಲ್ಲದೇ ಆಗುವ ಮಾರಕ ಬದಲಾವಣೆಗಳಾಗಿವೆ. ಇವೆಲ್ಲವನ್ನು ಮನಗಂಡು ಅಡಿಕೆ ಬೆಳೆಯ ವೈಜ್ಞಾನಿಕ ಅಭ್ಯಾಸದ ಆಧಾರಗಳ ಮೇಲೆ ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನವನ್ನು ತಯಾರಿಸಲಾಗಿದೆ. ಉತ್ಪನ್ನದಲ್ಲಿ ಇರುವ ಪ್ರತಿಯೊಂದು ಸೂಕ್ಷ್ಮಾಣು ಜೀವಿ ಹಾಗೂ ಪೋಷಕಾಂಶಗಳು ಒಂದಲ್ಲ ಒಂದು ರೋಗ ಅಥವಾ ಕೀಟಭಾದೆಯನ್ನು ಪ್ರತ್ಯಕ್ಷವಾಗಿಯೂ ಅಥವಾ ಪರೋಕ್ಷವಾಗಿಯೂ ತಡೆಯುವ ಶಕ್ತಿಯನ್ನು ಅಡಿಕೆ ಗಿಡದಲ್ಲಿ ಹೆಚ್ಚಿಸುತ್ತವೆ. ಆದ್ದರಿಂದ ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನವನ್ನು ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹಾಗೂ ಕೀಟ ನಿರೋಧಕ ಶಕ್ತಿ ಅಡಿಕೆ ಗಿಡದಲ್ಲಿ ಹೆಚ್ಚಿಸುತ್ತದೆ.

13. ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನವನ್ನು ಬಳಸಿದ ಎಷ್ಟು ದಿನಗಳ ನಂತರ ಅಡಿಕೆ ಗಿಡಗಳಲ್ಲಿ ಬದಲಾವಣೆ ನಿರೀಕ್ಷಿಸಬಹುದು?

ಅಡಿಕೆ ಬೆಳೆಯು ವಾರ್ಷಿಕ ಬೆಳೆಯಾಗಿದ್ದು ಪ್ರತಿ ದಿನವೂ ನಿರಂತರವಾಗಿ ನೀರು ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳುತ್ತಲೇ ಇರುತ್ತದೆ. ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಉತ್ಪನ್ನವನ್ನು ಎರಡು ಹಂತಗಳಲ್ಲಿ ಬೇಕಾದ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುವುದರಿಂದ ಅಡಿಕೆ ಬೆಳೆಯಲ್ಲಿ ಗಣನೀಯವಾದ ಆರೋಗ್ಯಕರ ಬದಲಾವಣೆಗಳು ಕಂಡುಬರುತ್ತವೆ. ಬದಲಾವಣೆಯ ಪ್ರಮಾಣವು ಈ ಮೊದಲ ಮಣ್ಣಿನ ಆರೋಗ್ಯ, ಗಿಡದ ಆರೋಗ್ಯ, ಮಣ್ಣಿನಲ್ಲಿರುವ ಸಾವಯವ ಅಂಶ ಹಾಗೂ ಸರಿಯಾದ ನೀರಿನ ನಿರ್ವಹಣೆಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಈ ಮೇಲಿನ ಅಂಶಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ ಪವರ್ ಸಾಯಿಲರ್ ಉತ್ಪನ್ನ ಬಳಸುವುದರಿಂದ ಎಲ್ಲವನ್ನೂ ಸರಿದೂಗಿಸಿಕೊಂಡು ಉತ್ಕೃಷ್ಟ ಬೆಳವಣಿಗೆಗೆ ನೆರವಾಗುತ್ತದೆ. ಅಡಿಕೆ ಗಿಡಗಳಲ್ಲಿ ಬದಲಾವಣೆಗಳನ್ನು ಬೆಳೆಯ ಇಳುವರಿಯಲ್ಲಿ ಗಣನೀಯವಾಗಿ ನಿರೀಕ್ಷಿಸಬಹುದು.

14. ಪವರ್ ಸಾಯಿಲರ್ ಬಳಸುವುದರಿಂದ ಯಾವುದಾದರೂ ಅಡ್ಡ ಪರಿಣಾಮಗಳು ಇವೆಯಾ?

ಉತ್ಪನ್ನವು ಅಡಿಕೆ ಗಿಡಗಳಿಗೆಂದೇ ತಯಾರಿಸಿದ ಸಮತೋಲನ ಆಹಾರವಾಗಿದೆ. ಇದನ್ನು ಬಳಸುವುದರಿಂದ ಸಕರಾತ್ಮಕ ಬದಲಾವಣೆಗಳನ್ನು ಕಾಣಬಹುದೇ ಹೊರತು ಯಾವುದೇ ನಕರಾತ್ಮಕ (ಅಡ್ಡಪರಿಣಾಮ ಬೀರುವ) ಬದಲಾವಣೆಗಳು ಕಂಡುಬರುವುದಿಲ್ಲ, ಬಳಸುವ ಪ್ರಮಾಣ ಮತ್ತು ವಿಧಾನಗಳು ವೈಜ್ಞಾನಿಕ ಆಧಾರಿತವಾಗಿದೆ.

15. ಪವರ್ ಸಾಯಿಲರ್ ಉತ್ಪನ್ನವನ್ನು ಸತತವಾಗಿ 3 ವರ್ಷ ಬಳಸಿದರೆ ರಾಸಾಯನಿಕ ಗೊಬ್ಬರಗಳ ಉಪಯೋಗವನ್ನು ಸಂಪೂರ್ಣವಾಗಿ ನಿಲ್ಲಿಸಬಹುದಾ?

11ನೇ ಪ್ರಶ್ನೆಯ ಉತ್ತರದಲ್ಲಿ ತಿಳಿಸಲಾಗಿದೆ ಗಮನಿಸಿ.

16. ಪವರ್ ಸಾಯಿಲರ್ ಉತ್ಪನ್ನವನ್ನು ನೀವು ನಮೂದಿಸಿದ ಅವಧಿಯಲ್ಲೇ ಬಳಸಬೇಕಾ?

ಅಡಿಕೆ ಗಿಡವು ನಿರಂತವಾಗಿ ವರ್ಷ ಪೂರ್ತಿ ಬೆಳೆಯುತ್ತದೆ ಹಾಗೂ ವರ್ಷದ ಎಲ್ಲಾ ದಿನಗಳಲ್ಲೂ ಪೋಷಕಾಂಶಗಳು ಬೇರಿಗೆ ದೊರೆಯುವಂತೆ ಒದಗಿಸುವುದು ರೈತರ ಕರ್ತವ್ಯವಾಗಿದೆ. ವಾತಾವರಣದಲ್ಲಿ ಚಳಿಗಾಲ, ಬೇಸಿಗೆ ಕಾಲ, ಮಳೆಗಾಲಕ್ಕೆ ತಕ್ಕಂತೆ ಪರಿಸರದಲ್ಲಿ ಉಷ್ಣಾಂಶ, ತೇವಾಂಶ, ಗಾಳಿಯ ದಿಕ್ಕು, ಮಳೆಯ ಪ್ರಮಾಣ ಇವೆಲ್ಲವೂ ಬದಲಾಗುತ್ತಲೇ ಇರುತ್ತವೆ. ಇವೆಲ್ಲಾ ಬದಲಾವಣೆಗೆ ತಕ್ಕಂತೆ ಅಡಿಕೆ ಗಿಡಗಳು ತಮ್ಮ ಬೆಳವಣಿಗೆಯ ಹಂತಗಳನ್ನು ಪೋಷಕಾಂಶಗಳ ದೊರೆಯುವಿಕೆಯ ಆಧಾರದಲ್ಲಿ ನಿರ್ಧರಿಸುತ್ತವೆ ಹಾಗೂ ಅಡಿಕೆ ಗಿಡವೂ ಆಯಾ ತಿಂಗಳ ವಾತಾವರಣಕ್ಕೆ ಅನುಗುಣವಾಗಿ ಪೋಷಕಾಂಶಗಳ ಅವಶ್ಯಕತೆಗಳನ್ನು ಬದಲಿಸಿಕೊಳ್ಳುತ್ತದೆ. ಇವೆಲ್ಲಾ ವಿಷಯವು ವೈಜ್ಞಾನಿಕ ಅಭ್ಯಾಸದಿಂದ ದೃಢಪಟ್ಟಿದೆ ಆದ್ದರಿಂದ ಆಯಾ ಸಮಯಕ್ಕೆ ತಕ್ಕಂತೆ ಸೂಕ್ತವಾದ ಪೋಷಕಾಂಶಗಳನ್ನು ಸೂಕ್ತವಾದ ಸಮಯದಲ್ಲಿ ಒದಗಿಸುವುದರಿಂದ ಅಡಿಕೆ ಗಿಡಗಳ ಬೆಳವಣಿಗೆ ಸಮತೋಲನವಾಗಿ ವೃದ್ಧಿಸುತ್ತದೆ. ಆದ್ದರಿಂದ ನಮೂದಿಸಿದ ಅವಧಿಯಲ್ಲೇ ಉಪಯೋಗಿಸುವುದು ಉತ್ತಮ ಅದಾಗ್ಯೂ ಕೆಲವು ದಿನಗಳ ವ್ಯತ್ಯಾಸದಲ್ಲಿ ಬಳಸುವುದರಿಂದ ಯಾವುದೇ ಸಣ್ಣ ಪ್ರಮಾಣದ ಅಡ್ಡ ಪರಿಣಾಮಗಳು ಅಥವಾ ವ್ಯತ್ಯಾಸಗಳು ಉಂಟಾಗುವುದಿಲ್ಲ.

17. ನೀರು ಕಡಿಮೆ ಇದ್ದರೂ ಪವರ್ ಸಾಯಿಲರ್ ಉತ್ಪನ್ನವನ್ನು ಬಳಸಬಹುದಾ?

ಅಡಿಕೆ ಗಿಡವೂ ಹೆಚ್ಚು ನೀರು ಆಧಾರಿತ ಬೆಳೆಯಾಗಿದ್ದು ನಿರಂತರ ನೀರಿನ ಅವಶ್ಯಕತೆ ಇರುತ್ತದೆ. ಗಿಡಕ್ಕೆ ಪೋಷಕಾಂಶಗಳನ್ನು ಬಳಸಲಿ ಅಥವಾ ಬಳಸದೇ ಇರಲಿ ನೀರು ಅತಿ ಮುಖ್ಯ. ರಾಸಾಯನಿಕ ಗೊಬ್ಬರಗಳಾದ ಯೂರಿಯಾ, ಡಿಎಪಿ, ಪೊಟ್ಯಾಶ್, 17:17:17 / 19:19:19,/ 10:26:26 ಇನ್ನಿತರ ಗೊಬ್ಬರಗಳನ್ನು ಬಳಸುವ ಮೊದಲು ಮತ್ತು ಬಳಸಿದ ನಂತರ ಹೆಚ್ಚು ತೇವಾಂಶ ಕಾಪಾಡುವುದು ಅತೀ ಮುಖ್ಯ. ಆದ್ದರಿಂದ ತೇವಾಂಶ ಕಡಿಮೆಯಾದಲ್ಲಿ ಅಡ್ಡಪರಿಣಾಮಗಳು ಹೆಚ್ಚಾಗುತ್ತವೆ. ಆದರೆ ಪವರ್ ಸಾಯಿಲರ್ ಉತ್ಪನ್ನವು ಅತಿ ಹೆಚ್ಚಾಗಿ ಜೈವಿಕ ಸೂಕ್ಷ್ಮಾಣು ಜೀವಿ ಹಾಗೂ ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿದೆ ಹಾಗೂ ಸಮತೋಲನ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ಉತ್ಪನ್ನವನ್ನು ಬಳಸುವ ಮೊದಲು ಮತ್ತು ಬಳಸಿದ ನಂತರ ನೀರಿನ ಪ್ರಮಾಣದಲ್ಲಿ ಸಣ್ಣ ವ್ಯತ್ಯಯ ಆದರೂ ಯಾವುದೇ ಹೆಚ್ಚಿನ ತೊಂದರೆ ಇಲ್ಲ.

18. ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ, ಹಸಿರೆಲೆ ಗೊಬ್ಬರ ಅಥವಾ ಸಾವಯವ ಗೊಬ್ಬರ ಬಳಸದೇ ಇದ್ದರೂ ಪವರ್ ಸಾಯಿಲರ್ ಉತ್ಪನ್ನವನ್ನು ಬಳಸಬಹುದಾ?

ಪವರ್ ಸಾಯಿಲರ್ ಉತ್ಪನ್ನವು ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಕುರಿಗೊಬ್ಬರ, ಅಥವಾ ಸಾವಯವ ಗೊಬ್ಬರಕ್ಕೆ ಪರ್ಯಾಯವಲ್ಲ. ಅಡಿಕೆ ಗಿಡದ ಬೇರುಗಳು ಮಣ್ಣಿನಲ್ಲಿರುವ ಎಲ್ಲ ಪೋಷಕಾಂಶಗಳು, ನೀರು ಗಾಳಿಯನ್ನು ಸರಾಗವಾಗಿ ಹೀರಿಕೊಳ್ಳಲು ಸಾವಯವ ಅಂಶ ಅತಿ ಮುಖ್ಯವಾಗಿರುತ್ತದೆ. ಹಾಗೂ ಗಮನಿಸಬೇಕಾದ ವಿಚಾರವೆಂದರೆ ನೀರಿನ ಪ್ರಮಾಣವು ಬೇಸಿಗೆ ಕಾಲದಲ್ಲಿ ಕಡಿಮೆಯಾದಾಗ ಅಡಿಕೆ ಗಿಡದ ಗಿಡದ ಬುಡದಲ್ಲಿ ಸಾವಯವ ಅಂಶ ಹೆಚ್ಚಾಗಿದ್ದರೆ ಗಿಡಗಳು ನೀರಿಲ್ಲದೆ ಒಣಗುವುದನ್ನು ಕೆಲವು ದಿನಗಳಿಗೆ ಮುಂದೂಡಬಹುದು. ಆದ್ದರಿಂದ ವರ್ಷಕ್ಕೆ ಒಂದು ಬಾರಿ ಅಲ್ಲದಿದ್ದರೂ ಎರಡು ವರ್ಷಕ್ಕೆ ಒಮ್ಮೆಯಾದರೂ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ, ಹಸಿರೆಲೆ ಗೊಬ್ಬರ ಅಥವಾ ಸಾವಯವ ಗೊಬ್ಬರ ಬಳಸುವುದು ಅವಶ್ಯಕ. ಸಾವಯವ ಅಂಶ ಸಮತೋಲನವಿರುವ ಮಣ್ಣಿಗೆ ಪವರ್ ಸಾಯಿಲರ್ ಉತ್ಪನ್ನವನ್ನು ವರ್ಷಕ್ಕೆ ಕನಿಷ್ಠ 2 ಬಾರಿ ಬಳಸುವುದರಿಂದ ಕಾಲಕಾಲಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯುತ್ತವೆ .

19. ಪವರ್ ಸಾಯಿಲರ್ ಬಳಸುವ ವಿಧಾನಗಳು ಯಾವುವು?

ಪ್ಲಾಂಟಾಕ್ಸ್ ನ ಪವರ್ ಸಾಯಿಲರ್ ಮೆಗಾ ಪ್ಯಾಕ್ನಲ್ಲಿ ಇರುವ ಮಿನಿ ಪ್ಯಾಕ್ ಒಂದನ್ನು ತೆರೆದು ಅದರಲ್ಲಿ ಇರುವ 6 ಉತ್ಪನ್ನ(Packets & Bottles)ಗಳನ್ನು 200 ಲೀಟರ್ ನೀರಿನಲ್ಲಿಬೆರೆಸಿ, ಬೆರೆಸಿದ ದ್ರಾವಣವನ್ನು ಪ್ರತಿ ಅಡಿಕೆ ಗಿಡಕ್ಕೆ 1 ಲೀಟರ್ ನಂತೆ 200 ಅಡಿಕೆ ಗಿಡ/ ಮರಗಳ ಬೇರಿಗೆ ಹಾಕಬೇಕು. ನಿಮ್ಮ ತೋಟದಲ್ಲಿ ಹನಿ ನೀರಾವರಿ ವ್ಯವಸ್ಥೆ ಇದ್ದರೆ ವೆಂಚುರಿ ಮೂಲಕ ಕೊಡಬಹುದು. ಒಂದು ಮಿನಿಬಾಕ್ಸ್ 200 ಗಿಡಗಳಿಗೆ ಆಗುವಂತೆ 200 ಲೀಟರ್ ನೀರಿನಲ್ಲಿ ಬೆರೆಸಿ ವೆಂಚುರಿ ಮೂಲಕ ಕೊಡಬಹುದು.

20. ಪವರ್ ಸಾಯಿಲರ್ ಉತ್ಪನ್ನವನ್ನು ಡ್ರಿಪ್ ಮೂಲಕ ಬಳಸಿದರೆ ಮೈಕ್ರೋಟ್ಯೂಬ್ನಲ್ಲಿ ಬ್ಲಾಕ್ ಆಗುವುದಿಲ್ಲವೇ?

ಪವರ್ ಸಾಯಿಲರ್ ನ ಎಲ್ಲಾ ಉತ್ಪನ್ನಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತವೆ. ಹಾಗೂ ಯಾವುದೇ ಕಾರಣಕ್ಕೂ ಮೈಕ್ರೋಟ್ಯೂಬ್ನಲ್ಲಿ ಬ್ಲಾಕ್ ಆಗುವುದಿಲ್ಲ. ಆದಾಗ್ಯೂ ವೆಂಚುರಿ ಮೂಲಕ ಬಳಸುವಾಗ ಉತ್ಕೃಷ್ಟ ಗುಣಮಟ್ಟದ ಫಿಲ್ಟರ್ ಅಳವಡಿಸುವುದು ಅತ್ಯವಶ್ಯಕ.

21. ಪವರ್ ಸಾಯಿಲರ್ ಉತ್ಪನ್ನವನ್ನು ಅಡಿಕೆ ಗಿಡಗಳಿಗೆ ವರ್ಷದ ಯಾವ ತಿಂಗಳಿಂದ ಪ್ರಾರಂಭಿಸಬೇಕು?

ಅಡಿಕೆ ಗಿಡವು ನಿರಂತರವಾಗಿ ಬೆಳೆಯುವ ಗಿಡವಾಗಿದ್ದು ನೀರಿನ ಅವಶ್ಯಕತೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಎಲ್ಲರಿಗೂ ತಿಳಿದಂತೆ ಗಿಡದ ಬೇರಿನ ತುದಿಯಿಂದ ಗಿಡದ ಗರಿಯ ತುದಿಯವರೆಗೂ ಪೋಷಕಾಂಶಗಳು ನೀರಿನ ಮೂಲಕವೇ ತಲುಪಬೇಕು. ಆದ್ದರಿಂದ ನೀರು ಗಿಡಕ್ಕೆ ನಿರಂತರವಾಗಿ ದೊರೆಯುವುದು ಎಷ್ಟು ಅವಶ್ಯಕವೋ ಪೋಷಕಾಂಶಗಳು ಅದೇ ನೀರಿನಲ್ಲಿ ಕರಗಿ ಗಿಡದ ಎಲ್ಲಾ ಭಾಗಕ್ಕೂ ಸಾಗಾಟವಾಗುವುದು ಅಷ್ಟೇ ಅವಶ್ಯಕ. ಇದು ರಾತ್ರಿ ಹಗಲು ಎನ್ನದೆ, ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಎನ್ನದೆ, ಗೊಬ್ಬರದ ಅಂಗಡಿಯಲ್ಲಿ ಗೊಬ್ಬರ ದೊರೆಯಲಿ, ದೊರೆಯದೇ ಇರಲಿ, ಗೊಬ್ಬರ ದೊರೆತರೂ ಅದನ್ನು ಹಾಕಲು ಸಮಯ ದೊರೆತರೂ, ದೊರೆಯದೇ ಇದ್ದರೂ ರೈತರ ಬಳಿ ಹಣ ಇದ್ದರೂ, ಹಣ ಇಲ್ಲದೇ ಇದ್ದರೂ, ಗಂಟೆಯ 60 ನಿಮಿಷ, ದಿನದ 24 ಗಂಟೆ ಹಾಗೂ ವರ್ಷದ 365 ದಿನ ಈ ಕೆಲಸ ಸಾಗುತ್ತಲೇ ಇರುತ್ತದೆ. ಆದ್ದರಿಂದ ಎಲ್ಲಾ ಸಮಯದಲ್ಲೂ ಗಿಡದ ಅವಶ್ಯಕತೆಗೆ ಅನುಗುಣವಾಗಿ ಪೋಷಕಾಂಶಗಳು ಗಿಡದ ಬೇರಿನ ಸುತ್ತಮುತ್ತ ದೊರೆಯುವುದು ಅವಶ್ಯಕ. ಅದೇ ರೀತಿ ದೊರೆಯುವಂತೆ ಮಾಡುವುದು ಅದರಿಂದ ಫಲ ಪಡೆದು ಸಂಪಾದಿಸುವ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅಡಿಕೆ ಮರವು ವರ್ಷವಿಡೀ ಯಾವುದಾದರೂ ಒಂದು ಅವಶ್ಯಕ ಬೆಳವಣಿಗೆಯ ಹಂತದಲ್ಲಿ ಇರುತ್ತದೆ. ಉದಾಹರಣಗೆ ಗರಿಗಳನ್ನು ವೃದ್ಧಿಸುವುದು, ಹೂವುಗಳನ್ನು ಬಿಡುವುದು, ಹೂವುಗಳು ಕಾಯಿ ಕಟ್ಟುವುದು, ಕಾಯಿ ಬೆಳೆದು ಬಲಿಯುವುದು ಇತ್ಯಾದಿ. ಈ ಮೇಲಿನ ಅಂಶಗಳನ್ನು ಗಮನಿಸಿದರೆ ಸಾಮಾನ್ಯರಿಗೂ ತಿಳಿಯುವ ವಿಷಯವೆಂದರೆ ವರ್ಷಪೂರ್ತಿ ಅಡಿಕೆ ಗಿಡಗಳಿಗೆ ಪೋಷಕಾಂಶದ ಅವಶ್ಯಕತೆ ಇರುತ್ತದೆ. ಆದ್ದರಿಂದ ಅತಿ ಕಡಿಮೆ ಸಮಯದ ಅಂತರದಲ್ಲಿ ವರ್ಷಕ್ಕೆ ಹಲವು ಬಾರಿ ವಿವಿಧ ರೀತಿಯ ಪೋಷಕಾಂಶಗಳನ್ನು ವಿವಿಧ ಹಂತದ ಬೆಳವಣಿಗೆಗೆ ಬೇಕಾಗುವಂತೆ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಪವರ್ ಸಾಯಿಲರ್ ಉತ್ಪನ್ನವನ್ನು ವರ್ಷದ ಯಾವ ತಿಂಗಳಿಂದ ಬೇಕಾದರೂ ಪ್ರಾರಂಭಿಸಬಹುದು.

latest-news-image CONTACT US latest-news-image